ಕಾಡಿನಿಂದ ಹಾದಿ ತಪ್ಪಿ ಬೆಂಗಳೂರಿನ ಕೂಡ್ಲು ಬಳಿಗೆ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಡುವ ಬದಲು ಗುಂಡೇಟು ಹೊಡೆದು ಸಾಯಿಸಿದ ಪ್ರಕರಣ ಜಾನಾಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಪ್ರಾಣಿ ಪ್ರಿಯ‌, ಸಾಮಾಜಿಕ ಹೋರಾಟಗಾರ ಮಹಾಂತೇಶಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನಾಗಿಯೇ ಬಲೆ ಬಿದ್ದ ಚಿರತೆಯನ್ನು ಗುಂಡಿಟ್ಟು ಕೊಲೆ ಮಾಡುವಂತಹದು ಏನಾಗಿತ್ತು..? ಚಿರತೆ ಮನುಷ್ಯರ ಮೇಲೆ ಭೀಕರವಾಗಿ ದಾಳಿ ಮಾಡಿತ್ತೇ..? ಅಥವಾ ಈ ಹಿಂದೆ ಮನುಷ್ಯರನ್ನು ಕೊಂದು ತಿಂದಿದ್ದ ಬಗ್ಗೆ ಏನಾದರೂ ಅರಣ್ಯ ಇಲಾಖೆಗೆ ಮಾಹಿತಿ ಇತ್ತೇ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.